ಇದನ್ನೆಲ್ಲ ಅವಳು ಮಾಡಿದ್ದು ಅವಳ ಊರಿನ ಜನಪದ ಹಾಡುಗಳ ಮೂಲಕಾನೆ. ಸಾಮಾನ್ಯ ಮನುಷ್ಯರಿಗಿಂತ ಎರಡುಪಟ್ಟು ವೋಕಲ್ ರೇಂಜ್ ಈಕೆಯ ದನಿಯಲ್ಲಿತ್ತು. ನಾಕೂವರೆ-ಐದು ಆಕ್ಟೇವ್ ತನಕಾನೂ ಅವಳ ಧ್ವನಿ ಹೋಗುತ್ತಿತ್ತು ಅಂತ ಹೇಳ್ತಾರೆ. ಇದೆಲ್ಲ ಟೆಕ್ನಿಕಲ್ ಟರ್ಮ್ ಯಾವನಿಗೂ ಅರ್ಥ ಆಗಲ್ಲ. ಆಕೆಯ ಹಾಡುಗಳನ್ನ ಕೇಳಿದ್ರೆ ಆಕೆ ಗಂಟಲನ್ನೇ ಒಂದು ಇನ್ಟ್ರುಮೆಂಟ್ ತರ ಬಳಸೋದು ಮಾತ್ರ ರಪ್ ಅಂತ ಮಕಕ್ಕೆ ಹೊಡಯತ್ತೆ. ಇಂತಾಕೆಯನ್ನ ಹಾಲಿವುಡ್ ಸುಮ್ಮನೆ ಬಿಡತ್ತಾ. ಆಲ್ಬಂ ಕವರ್ ಮೇಲಿನ ಇವಳ ಚಿತ್ರಗಳು ಮತ್ತು ಇವಳ ಧ್ವನಿಯಲ್ಲಿದ್ದ ಮಾದಕತೆ ಎಲ್ಲಾ ಸೇರಿಸಿ "ಎಕ್ಸಾಟಿಕಾ" ಅಂತ ಒಂದು ಹೊಸ ಜಾನರ್ರನ್ನೇ ಸೃಷ್ಟಿಸಲಾಯ್ತು.
ಇವಾಗ ಝೀ ಕನ್ನಡದ ಸರಿಗಮಪದಲ್ಲಿ ಹಳ್ಳಿಯವರಿಗೆ ಪಂಚೆ ಹಾಕ್ಸಿ, ಸಾಬರ ಹುಡುಗಿಗೆ ಬುರ್ಖಾ ಹಾಕ್ಸಿ ಎನ್ಕ್ಯಾಶ್ ಮಾಡಿಕೊಳ್ತಾರಲ್ಲ ಅದೇ ತರ ಈಕೆಯ ಆಲ್ಬಂ ಕವರ್‌ಗಳೂ ಸೌತ್ ಅಮೆರಿಕಾದ ನೇಟಿವ್ ವೇಷಗಳಿಂದಾನೆ ತುಂಬಿದಾವೆ. ಇದರ ಜೊತೆಗೆ ಈಕೆ ಇಂಕಾ ಸಾಮ್ರಾಜ್ಯದ ಕೊನೆಯ ದೊರೆ ಅಟಾಹುಲ್ಪಾ ವಂಶದವಳು ಅಂತೆಲ್ಲಾ ದಂತಕತೆಗಳನ್ನ ಹಾಲಿವುಡ್ಡೇ ಸೃಷ್ಟಿಸಿ ಹರಿಯಬಿಟ್ಟಿತ್ತು. ಇಂತಾ ಯಾವ ಕತೆಗಳನ್ನೂ ಯೀಮಾ ಇದು ಸುಳ್ಳು ಗುರು ಅಂತ ಹೇಳೋಕೆ ಹೋಗಲಿಲ್ಲ. ಇಂತದನ್ನೆಲ್ಲ ಆಕೆ ಎಂಜಾಯ್ ಮಾಡ್ತಿದ್ದಳು. ಮೊನ್ಮೊನ್ನೆ ಸ್ಪಾಟಿಫೈ ಅಲ್ಲಿ ಈವಮ್ಮ ಸಿಕ್ಕಮೇಲೆ ಈಕೆಯ ಒಂದು ಹಾಡನ್ನ ಬಿಗ್ ಲೆಬೋಸ್ಕಿಯಲ್ಲಿ ಕೋಅನ್ ಬ್ರದರ್ಸ್ ಯೂಸ್ ಮಾಡಿದ್ದಾರೆ ಅಂತ ಕೇಳ್ತಾ ಕೇಳ್ತಾ ರಿಯಲೈಸ್ ಆಯ್ತು. ಪುರ್ಸೊತ್ ಸಿಕ್ರೆ ಕೇಳಿ ಮಜಾ ಇದಾವೆ ಹಾಡುಗಳು :)
No comments:
Post a Comment